Bele parihara hana : ರೈತರಿಗೆ ಬೆಳೆ ಪರಿಹಾರ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ.
ರಾಜ್ಯದಲ್ಲಿನ ಹಲವಾರು ಪ್ರದೇಶಗಳಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಹಲವು ರೈತರ ಬೆಳೆಗಳು ನಾಶ ಆಗಿವೆ. ಈ ರೀತಿ ಅತಿಯಾದ ಮಳೆಯಿಂದಾಗಿ ಬೆಳೆ ನಾಶ ಆದ ರೈತರಿಗೆ ಸರ್ಕಾರವು ಪರಿಹಾರ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಆದ್ದರಿಂದ 2025 26 ನೇ ಸಾಲಿನ ಬೆಳೆ ನಾಶ ಪರಿಹಾರ ಹಣವನ್ನು ಪಡೆಯಲು ರೈತರ ಮಾಡಬೇಕಾದ ಕಡ್ಡಾಯ ಕೆಲಸಗಳನ್ನು ಮತ್ತು ಪರಿಹಾರ ಹಣ ಯಾವಾಗ ರೈತರ ಖಾತೆಗೆ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಅತಿಯಾದ ಮಳೆಯಿಂದಾಗಿ ಬೆಳೆನಾಶ ಆದ ರೈತರಿಗೆ ಜೀವನೋಪಾಯಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡು ಸಹಕರಿಸುವ ಉದ್ದೇಶದಿಂದ , ನಿರ್ದಿಷ್ಟ ಪರಿಹಾರ ಹಣವನ್ನು ನೀಡುತ್ತಿದೆ. ಇದು ರೈತರಿಗೆ ಒಂದು ಸಿಹಿ ಸುದ್ದಿ ಆಗಿದೆ. ಬೆಳೆ ಪರಿಹಾರ ಹಣ ಜಮಾ ಆಗುವ ಕುರಿತ ಪ್ರತಿಯೊಂದು ಮಾಹಿತಿ ಇಲ್ಲಿ ತಿಳಿಯೋಣ.
SSLC ಪರೀಕ್ಷೆ 2026 ರ ವೇಳಾಪಟ್ಟಿ ಬಿಡುಗಡೆ, ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
ಬೆಳೆ ಪರಿಹಾರ ಹಣ (Bele parihara hana) :
ಕರ್ನಾಟಕದಲ್ಲಿ ಅತಿಯಾದ ಮಳೆಯಿಂದಾಗಿ ಬಹಳಷ್ಟು ರೈತರು ಬಿತ್ತಿದ ಬೆಳೆ ನಾಶ ಆಗಿದೆ. ಆದ್ದರಿಂದ ರಾಜ್ಯದ ಎಲ್ಲಾ ರೈತರು ಆರ್ಥಿಕವಾಗಿ ತೊಂದರೆಗೆ ಈಡಾಗಿದ್ದಾರೆ. ಇದೆ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರಿಗೆ ನೆರವು ನೀಡುವ ಉದ್ದೇಶದಿಂದ , ರಾಜ್ಯ ಸರ್ಕಾರವು ಕರ್ನಾಟಕಕ್ಕೆ 391 ಕೋಟಿ ಹಣ ಬಿಡುಗಡೆ ಮಾಡಿದರೆ ಹಾಗೂ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ಬೆಳೆ ನಾಶ ಆದ ರೈತರಿಗೆ ಪ್ರತಿ ಹೆಕ್ಟರ್ ಗೆ 8500 ಪರಿಹಾರವಾಗಿ ನೀಡುತ್ತಿದೆ. ಇದು ರೈತರಿಗೆ ಜೀವನೋಪ ನಡೆಸಲು ಆರ್ಥಿಕವಾಗಿ ನೆರವನ್ನು ನೀಡುತ್ತದೆ.

ರೈತರಿಗೆ ಸಿಗುವ ಬೆಳೆ ಪರಿಹಾರ ಹಣ ಎಷ್ಟು? (ಪ್ರತಿ ಹೆಕ್ಟರ್ ಗೆ )
- ಒಣ ಬೇಸಾಯ ಭೂಮಿಗೆ – ಸುಮಾರು 17,000 ತನಕ
- ನೀರಾವರಿ ಭೂಮಿಗೆ – ಸುಮಾರು 25,000 ತನಕ
- ದೀರ್ಘಕಾಲಿಕ ಬೆಳೆಗಳಿಗೆ – ಸುಮಾರು 31,000 ತನಕ
ಬೆಳೆ ಪರಿಹಾರ ಹಣ ಪಡೆಯಲು ರೈತರು ಕಡ್ಡಾಯವಾಗಿ ಕೆಲಸ ಮಾಡಿ.
- FRUITS ಪೋರ್ಟಲ್ ಅಲ್ಲಿ ನೋಂದಣಿ ಮಾಡಿಕೊಳ್ಳಿ.
- ರೈತರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು
- ನಿಮ್ಮ ಜಮೀನಿಗೆ ( rtc ) ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು.
ಬೆಳೆ ಪರಿಹಾರ ಹಣ ಯಾವಾಗ ಜಮ ಆಗುತ್ತದೆ?
ರಾಜ್ಯದಲ್ಲಿನ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಬೆಳೆ ನಾಶ ಆದ ಅರ್ಹ ರೈತರಿಗೆ ಪರಿಹಾರ ಹಣವನ್ನು ನೇರವಾಗಿ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ಹಾಗೆ ರಾಜ್ಯದ ಎಲ್ಲಾ ಅರ್ಹ ರೈತರಿಗೆ ಬೆಳೆನಾಶ ಆದ ಕಾರಣ ಪರಿಹಾರ ಹಣವನ್ನು ಇನ್ನು 15 ದಿನಗಳಲ್ಲಿ ಖಾತೆಗೆ ಜವ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.